ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಬಾಂಗ್ಲಾದೇಶ ವಿರುದ್ದ ಮೂರನೇ ಮತ್ತು ನಿರ್ಣಾಯಕ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆಲುವು ಸಾಧಿಸಿದೆ. ಬಾಂಗ್ಲಾದೇಶ ವಿರುದ್ಧ 5 ವಿಕೆಟ್‌ಗಳಿಂದ ಅಫ್ಘಾನಿಸ್ತಾನ ಗೆದ್ದಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶದ ಪರ ಮಹಮ್ಮದುಲ್ಲಾ (98) ಮತ್ತು ಮೆಹದಿ ಹಸನ್ ಮಿರಾಜ್ (66) ಅರ್ಧಶತಕಗಳ ಬಾರಿಸಿದರು. ಇದರೊಂದಿಗೆ ಬಾಂಗ್ಲಾದೇಶ 8 ವಿಕೆಟ್ ನಷ್ಟಕ್ಕೆ 244 ರನ್ ಗಳಿಸಿತು. ಅಫ್ಘಾನಿಸ್ತಾನ ಪರ ಅಜ್ಮತುಲ್ಲಾ ಒಮರ್ಜಾಯ್ 4 ವಿಕೆಟ್ ಪಡೆದು ಮಿಂಚಿದರು. 245 ರನ್‌ಗಳ ಗುರಿ ಬೆನ್ನತ್ತಿದ ಅಫ್ಘಾನ್ ಪರ ರಹಮಾನುಲ್ಲಾ ಗುರ್ಬಾಜ್ ಭರ್ಜರಿ ಶತಕ ಬಾರಿಸಿ ಗೆಲುವು ತಂದು ಕೊಟ್ಟರು.
ರಹಮಾನುಲ್ಲಾ ಗುರ್ಬಾಜ್ ಆಡಿದ 120 ಎಸೆತಗಳಲ್ಲಿ 5 ಬೌಂಡರಿ ಮತ್ತು 7 ಸಿಕ್ಸರ್‌ಗಳ ನೆರವಿನಿಂದ 101 ರನ್‌ಗಳ ಕಲೆ ಹಾಕಿದರು. ಮತ್ತೊಂದೆಡೆ ಅಜ್ಮತುಲ್ಲಾ ಉಮರ್ಜಾಯ್ ಕೂಡ ಅಜೇಯ 70 ರನ್‌ಗಳ ಇನ್ನಿಂಗ್ಸ್ ಆಡಿದರು. ಈ ಇಬ್ಬರ ಅದ್ಭುತ ಇನ್ನಿಂಗ್ಸ್‌ನಿಂದಾಗಿ ಅಫ್ಘಾನಿಸ್ತಾನ ಅದ್ಭುತ ಗೆಲುವು ಸಾಧಿಸಿತು. ಅಫ್ಘಾನಿಸ್ತಾನ ತಂಡಕ್ಕೆ ಇದು ಸತತ ಮೂರನೇ ಏಕದಿನ ಸರಣಿ ಜಯವಾಗಿದೆ. ಈ ಮೊದಲು ದಕ್ಷಿಣ ಆಫ್ರಿಕಾ ತಂಡವನ್ನು 2-1 ಮತ್ತು ಐರ್ಲೆಂಡ್ ಅನ್ನು 2-0 ಅಂತರದಲ್ಲಿ ಅಫ್ಘಾನ್ ಸೋಲಿಸಿತು.
ರಹಮಾನುಲ್ಲಾ ಗುರ್ಬಾಜ್ ದಾಖಲೆ
ಬಾಂಗ್ಲಾದೇಶ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ರಹಮಾನುಲ್ಲಾ ಗುರ್ಬಾಜ್ ಭರ್ಜರಿ ಶತಕ ಬಾರಿಸುವ ಮೂಲಕ ಹೊಸ ದಾಖಲೆ ಮಾಡಿದ್ದಾರೆ. ಗುರ್ಬಾಜ್ ಅವರು 8 ಏಕದಿನ ಶತಕಗಳನ್ನು ಗಳಿಸಿದ ಎರಡನೇ ಕಿರಿಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಗುರ್ಬಾಜ್ ಅವರು 22 ವರ್ಷ ಮತ್ತು 349 ದಿನಗಳಲ್ಲಿಈ ಸಾಧನೆಯನ್ನು ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ವಿಕೆಟ್‌ಕೀಪರ್ ಕ್ವಿಂಟನ್ ಡಿ ಕಾಕ್ ನಂತರ 8 ಏಕದಿನ ಶತಕಗಳನ್ನು ಗಳಿಸಿದ ಎರಡನೇ ಕಿರಿಯ ಬ್ಯಾಟರ್ ಆಗಿದ್ದಾರೆ . ಡಿ ಕಾಕ್ 22 ವರ್ಷ 312 ದಿನಗಳ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದರು.
ದಿಗ್ಗಜರ ದಾಖಲೆ ಬ್ರೇಕ್
ಗುರ್ಬಾಜ್ ಅವರು ಏಕದಿನ ಕ್ರಿಕೆಟ್‌ನಲ್ಲಿ 8 ಶತಕಗಳನ್ನು ಬಾರಿಸುವ ಮೂಲಕ ಸ್ಟಾರ್ ಆಟಗಾರರ ದಾಖಲೆ ಮುರಿದಿದ್ದಾರೆ. ಟೀಮ್ ಇಂಡಿಯಾದ ದಿಗ್ಗಜ ಬ್ಯಾಟರ್‌ಗಳಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಅಜಮ್ ಅವರನ್ನು ಗುರ್ಬಾಜ್ ಹಿಂದಿಕ್ಕಿದ್ದಾರೆ. ಸಚಿನ್ ತೆಂಡೂಲ್ಕರ್ 22 ವರ್ಷ ಮತ್ತು 357 ದಿನಗಳಲ್ಲಿ ಏಕದಿನ ಕ್ರಿಕೆಟ್‌ನಲ್ಲಿ 8 ಶತಕ ಬಾರಿಸಿದರೆ, ವಿರಾಟ್ ಕೊಹ್ಲಿ 23 ವರ್ಷ ಮತ್ತು 27 ದಿನಗಳಲ್ಲಿ ಮತ್ತು ಬಾಬರ್ ಅಜಮ್ 23 ವರ್ಷ ಮತ್ತು 280 ದಿನಗಳಲ್ಲಿ 8 ಶತಕಗಳನ್ನು ಸಿಡಿಸಿದ್ದಾರೆ.
ಇದಲ್ಲದೆ, ಗುರ್ಬಾಜ್ ಅವರು 8 ಶತಕಗಳನ್ನು ಗಳಿಸುವ ಮೂಲಕ 23 ವರ್ಷಕ್ಕಿಂತ ಮೊದಲು ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದರ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದರು. ಡಿ ಕಾಕ್ ಕೂಡ 23 ವರ್ಷಕ್ಕಿಂತ ಮೊದಲು 8 ಶತಕಗಳನ್ನು ಗಳಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ